Wednesday, April 12, 2017

ನಂಬಿಕೆ ಇರದ ಸ್ನೇಹವಿದ್ದರೇನು ಫಲ
ಮನಸೇಂಬ ಮರ್ಕಟಕೆ ಇತ್ತಂತೆ ಎಲ್ಲ ಬಲ
ಇದ್ದರೆ ಇರಬೇಕು ಪ್ರೀತಿಯು ತುಂಬಿದ ಸ್ನೇಹದ ಸಾಲ
ಬಂದೇ ತೀರುವುದೊಂದು ದಿನ ಅಂತಹದೊಂದು ಸಕಾಲ 

Sunday, June 21, 2015

बारिश !!

This is a transliteration of a poem originally written by a good friend of mine. All credits of the thoughts should go to my friend !!

बरस्ना था इस बारिश को न जाने कब तक
बादल बनके फैला था मन की आसमान में अब तक  । 
ऐसे पिघला है अश्कोंके धार न जाने किस की प्यार में 
जैसे काली घटा गरज के पिघला हो सावन के मौसम में  ॥ 

Tuesday, March 17, 2015

पथर

पथर की तरह खड़ी थी तुम 
प्यार के बहार आने के वक़्त में  !
दिल लुटाने का इरादा था तुझपे 
उससे लुटादिया हमने यूही मुफ़्त में !!

----रमेशा ----

Wednesday, March 11, 2015

ಕೀಲು ಗೊಂಬೆಗಳು

ಶ್ರೀ ರಾಯರ ಚರಣಕಮಲಗಳಿಗೆ ಒಂದು ಸಣ್ಣ ಮಾಲಿಕೆ ...

!!ಓಂ ಶ್ರೀ ರಾಘವೇಂದ್ರಾಯ ನಮಃ!!

ಕೀಲು ಗೊಂಬೆಗಳು :

ದೇವನೇ ಇದೇನು ನಿನ್ನ ಲೀಲೆಯ ಹೊನಲು
ನಾವು ಇದರಲಿ ಬರಿಯ ಕೀಲು ಗೊಂಬೆಗಳು

ಮನುಜಗೆ ನೀ ಮನಸು ಕೊಟ್ಟೆ
ಮನಸಿನಲ್ಲಿ ಆಸೆಯಿಟ್ಟೆ
ಆಸೆ ಹಿಂದೆ ಛಲವನಿತ್ತೆ
ದುಡಿದು ದಣಿಯಲು

ಪ್ರೀತಿಯೆಂಬ ಹೂವ ಕೊಟ್ಟೆ
ರೋಷವೆಂಬ ಮುಳ್ಳನಿತ್ತೆ
ಹೊರಗೆ ಕಾಣೊ ಕಣ್ಣು ಕೊಟ್ಟೆ
ಅಂತರಾತ್ಮ ಮರೆಯಲು

ಬದುಕಿಗೆ ನೀ ಬಣ್ಣ ಕೊಟ್ಟೆ
ಬಣ್ಣ ಬಣ್ಣದ ಕನಸು ಕೊಟ್ಟೆ
ನೆರಳಿನಂತೆ ಸಾವನಿಟ್ಟೆ
ನಿನ್ನ ನೆನೆಯಲು

ಜ್ಞಾನವೆಂಬ ನದಿಯ ಕೊಟ್ಟೆ
ಅಜ್ಞಾನವೆಂಬ ಸುಳಿಯನಿಟ್ಟೆ
ಕೈ ಹಿಡಿದು ನಡೆಪ ಗುರುವ ಕೊಟ್ಟೆ
ನಿನ್ನನರಿಯಲು

ದೇವನೇ ಇದೇನು ನಿನ್ನ ಲೀಲೆಯ ಹೊನಲು
ನಾವು ಇದರಲಿ ಬರಿಯ ಕೀಲು ಗೊಂಬೆಗಳು

-----ರಮೇಶ ನಾರಾಯಣರಾವ್ ------

Thursday, March 5, 2015

मेहफिल !!

भरी मेहफिल में आंसू बहाया न करो
किसी के इंतज़ार में ज़िन्दगी गवारा न करो   !
जैसे दिखती नहीं अंधेरों में साया
समंदर में मछली की आंसू भी नज़र में न आया   !!


ಕನ್ನಡದ ಅನುವಾದ :

ಸಂತೆ-ಸಮಾರಂಭಗಳಲ್ಲಿ ನೀನೆಂದಿಗೂ ಅಳಬೇಡ
ಯಾರ ಬರುವಿಕೆಗಾಗಿಯೂ ಕಾಯುತ್ತ ಜೀವನ ನಾಶಗೊಳಿಸಬೇಡ !
ಹೇಗೆ ಕತ್ತಲಲ್ಲಿ ಯಾರಿಗೂ ಅವರ ನೆರಳು ಕಾಣುವುದಿಲ್ಲವೋ 
ಹಾಗೆಯೇ ಮೀನಿನ ಕಂಬನಿಯೂ ಸಾಗರದಲ್ಲಿ ಯಾರಿಗೂ ಕಾಣುವುದಿಲ್ಲ  !!

------- ರಮೇಶ ಎಸ್ ಎನ್ ---------

Monday, December 22, 2014

इंतज़ार !!!

न किसी की सहारे  का इंतज़ार है
न इंतज़ार है किसी की मोहब्बत का !
इस सफर में अगर  इंतज़ार है
तो वो है सिर्फ किसी हमदर्द के साथ  चलने का !!

Friday, July 6, 2012

कशिश

तुम्हारी आँखोंसे टपका हर एक बूँद 
बने मोती मेरे हथेली पर  !
कशिश है इतनी तुम्हारी तरफ 
की हज़ारों बूँद खून बहादे हर एक मोती पर !!

Wednesday, August 24, 2011

नशा !!

तुम्हारे प्यार ने इस तरह से जादू है किया

बिन पिए ही मुझमे नशा सा छागया !

न जाने कहा कहा भटकता हु तेरे दीदार को

तेरे झील सी आखों में मैंने खुदको है खो दिया !!   


Monday, August 22, 2011

ನನ್ನೂರು-ನನ್ನೋರು


ಹೊರಟೆನು ನಾನು ಏರಿಸುವೆನೆಂದು ಬಾನಿಗೊಂದು ಏಣಿಯನು
ಸಾಗರದಾಚೆಯ ಈ ಬದಿಗಿಂದು ಒಬ್ಬಂಟಿಯಾಗಿ ಬಂದಿಹೆನು !
ನಗುತ ನುಡಿವ ಜನರ ನಡುವೆ ಒಂಟಿತನವು ಮೂಡಿಹುದು
ಇದಕೆ ನಾನೇ ಕಾರಣವೇನೋ ಎನ್ನುವ ಪ್ರಶ್ನೆಯು ಕಾಡಿಹುದು !!

ತಣ್ಣಗೆ ಬೀಸುವ ಗಾಳಿಯು ಕೂಡ ಏನೋ ಕಸಿ-ಬಿಸಿ ತಂದಿರಲು
ಹಿಂತಿರುಗುವ ದಿನವನು ಕಾಯುತ ನಿಂತೆ, ಸಾಗುವುದೆಂತೀ ಕಾರಿರುಳು !
ಮಿಡಿದಿದೆ ಮನವು ಕಾಣುವ ತವಕದಿ, ಮನಸಿದು ಸ್ಫುಟಿಸಿದೆ ಕಣ್ಣೀರು
ಜಗದಲಿ ನನಗೆ ಎಲ್ಲಕು ಮಿಗಿಲು, ನನ್ನೂರು-ನನ್ನೋರು !!

------ರಮೇಶ ಎಸ್ ಎನ್ -------

Tuesday, June 14, 2011

ಪವಾಡ

ಆಕಾಶದಲ್ಲಿ ಎಲ್ಲೆಲ್ ನೋಡಿದ್ರು ಸುತ್ಕೊಂಡ್ ಬಂತು ಮೋಡ

ಗಿಡ ಗೆಂಟೆ  ಬಾಯ್ಬಾಯಿ ಬಿಡ್ತಾ ಹನಿಗೆ ಕಾಯ್ತಿವೆ ನೋಡ

ದಿನಕ್ಕೊಂದು ಯೋಚನೆ ನಮ್ನ ಕಿತ್ಕೊಂಡ್ ತಿನ್ತಿದೆ ಮೂಢ

ಸಾಯಕ್ಮುನ್ನ ನಲಿಯುತ ಒಮ್ಮೆ ಕಣ್ಬಿಟ್ ನೋಡೀ ಪವಾಡ