Thursday, November 27, 2008

ಕನಸು - ಸವಿಗನಸು

ಹೇಗೆ ಬಣ್ಣಿಸಲಿ ರಾತ್ರಿ ಕಂಡ ಸವಿಗನಸು
ಮೈ ನವಿರೆಳಿಸುವ ಚೆಲುವನು ಕಂಡ ಕನಸು

ಸೂರ್ಯನ ಕಿರಣಕೆ ಸೀರೆಯ ಉಡಿಸಿ
ಚಂದ್ರನ ತಂದು ಹಣೆಯಲಿ ಇರಿಸಿ
ನಕ್ಷತ್ರದಂಥ ಕಂಗಳ ಮೂಡಿಸಿ
ಸೃಷ್ಟಿಯು ತಂದ ಅಪರೂಪದ ರೂಪಸಿ

ಹೇಗೆ ಬಣ್ಣಿಸಲಿ ರಾತ್ರಿ ಕಂಡ ಸವಿಗನಸು
ಮೈ ನವಿರೆಳಿಸುವ ಚೆಲುವನು ಕಂಡ ಕನಸು

ಕಣ್ಣಲ್ಲೇ ಸನ್ನೆ ಮಾಡಿ ನನ್ನ ಸೆಳೆದಲಾಕೆ
ಮಾತಿನಲ್ಲಿ ಮೋಡಿ ಮಾಡಿ ಮನ ಗೆದ್ದಳಾಕೆ
ಕ್ಷಣಗಳಲ್ಲಿ ಮನವ ಆವರಿಸಿದಲಾಕೆ
ಇಂಥ ಸವಿಗನಸು ಮತ್ತೊಮ್ಮೆ ಬರಬಾರದೇಕೆ

ಹೇಗೆ ಬಣ್ಣಿಸಲಿ ರಾತ್ರಿ ಕಂಡ ಸವಿಗನಸು
ಮೈ ನವಿರೆಳಿಸುವ ಚೆಲುವನು ಕಂಡ ಕನಸು

2 comments:

shetty said...

excellent one..

i like it

Ramesha said...

Thank you... Infact you are the first one to comment on this post..