Monday, December 22, 2008

ಮುಸುಕು

ಕೈ ಬಾಚಿ ತಬ್ಬಿಹುದು ಮೌನವಿಂದು ನನ್ನನು
ಕಾಲ ಚಕ್ರದ ಮಾಯೆ ಆವರಿಸಿದೆ ಈ ಜಗವನು
ಮೆಲುಕು ಹಾಕಲೆಂದು ಕುಳಿತೆ ಕಳೆದ ನಲಿವಿನ ಘಳಿಗೆ
ಮುಸುಕುಗೊಂಡು ಮೋಡ ಕವಿದು ಮನ ಮಸಣವಾಗಿದೆ ನೆನಪುಗಳಿಗೆ!!

ಹೂವಿನನುಬಂಧ

ಬಿಸಿಲ ಧಗೆಯಲಿ, ಕೊರೆವ ಚಳಿಯಲಿ, ಸುರಿವ ಮಳೆಯಲಿ
ನಿಸ್ವಾರ್ಥದಿಂದಲಿ ನಿಂತು ನಗುವುದು ಹೂವು ಬಳ್ಳಿಯಲಿ
ತಾನು ನೊಂದರೂ, ಮುಡಿದ ತುರುಬನು ತಬ್ಬಿ ನಿಲುವುದು ತೋರಿ ಅನುಬಂಧ
ಅದರ ನಿಸ್ವರ್ಥಕೆಲ್ಲಿ ಸಾಟಿ. ಬಳ್ಳಿಗಿರದೆ, ಜೀವ ಬಿಡದೆ, ಗಾಳಿ ಪಾಲಗಿಹುದದರ ಸುಗಂಧ !!

Friday, December 19, 2008

दरवाज़ा

आप के प्यार ने दरवाज़ा खोल्दिया खुशी का
हमने सोचा था की मिलगया मकसद जीने का
टूट गए सारे सपने जब जुदाई का इशारा किया आपने
हम समझ गए की घलत दरवाज़ा खटखटाया था हमने !!!

प्यार का नज़र

प्यार तो हम्ने बोहुत किया था
उनके प्यार पे भी बोहुत भरोसा था
अपने दिल को ड़ालदिया था उन्के कदमो में
अफ़सोस के उन्के नज़र तो ऊपर आसमान पे था !!!

Monday, December 15, 2008

ಸ್ನೇಹ ದುಂಬಿ

ಸುಂದರ ಉದ್ಯಾನದಲಿ ಅರಳಿದ ಹಾಗೆ ಹೂವು ಬಳ್ಳಿಯಲಿ
ಹೊಸ ಭಾವನೆಗಳು ಅರಳಿತ್ತು ಮನದ ಮುಗಿಲಿನಲಿ
ಸ್ನೇಹವೆಂಬ ದುಂಬಿಯದು, ಪ್ರೀತಿಯೆಂಬ ಜೇನ ಸವಿದು
ಹಾರಿಹುದು ಮತ್ಯಾವ ಹೂವಿನೆಡೆಗೆ, ಹೀರಲೆಂದೇ ಆ ಅಮೃತಬಿಂದು?

Tuesday, December 9, 2008

ಆ ಕಣ್ಣುಗಳು

ಬಹುದಿನಕ್ಕೊಮ್ಮೆ ಬರುವ ಹುಣ್ಣಿಮೆಯ ಚಂದ್ರನೇ ಆ ಕಣ್ಣುಗಳು
ಕಡಲಾಳದಲ್ಲಿರುವ ತೊಳೆದ ಅಪರೂಪದ ಮುತ್ತುಗಳೇ ಆ ಕಣ್ಣುಗಳು
ನನ್ನೆದೆ ತಳ-ಮಳಿಸಿ ತುಟಿಗೆ ನಗುವ ತರುವುವು ಆ ಕಣ್ಣುಗಳು
ಆ ಕಂಗಳ ಮತ್ತೊಮ್ಮೆ ಕಾಣಲು ಪರಿತಪಿಸುತ್ತಿವೆ ನನ್ನೀ ಕಣ್ಣುಗಳು

Monday, December 8, 2008

ಹೃದಯ ವೀಣೆ

ನನ್ನ ಹೃದಯ ವೀಣೆಯನ್ನು ಮೀಟಿದವಳು ನೀನು
ನೀನು ಮೀಟಿದ ಸ್ವರವ ಕಲಿತು ಹಾಡಿದೆನು ನಾನು
ತಂತಿಯು ಮುರಿಯಿತು ನುಡಿಯಲು ವೀಣೆಯು ನಿಷಾದದಲಿ
ಬಿಕ್ಕುತಿಹುದು ಮುರಿದ ವೀಣೆ ನೋವ ತಿಂದು ವಿಷಾದದಲಿ

ಮಾತನಾಡುವ ಮೌನ

ಕೆಲ ಸಂಬಂಧಗಳಲ್ಲಿ ಕಿರುಚಿ ಕೂಗಾಡಿದರು ಕೇಳಿಸದು ದನಿ
ನೋವಿನಲಿ ನೊಂದು ಸುರಿಸಿ ಫಲವೇನು ಬೆಲೆಯಿರದ ಕಂಬನಿ
ಎದೆಗರ್ಭದೊಳಗೆ ಪಿಸುಗುಟ್ಟುವ ದನಿ-ಹನಿಗಳ ಹೇಳಲು ಪದಗಳೇಕೆ ಪ್ರೀತಿಯಲಿ
ಅದು ಅರ್ಥಗರ್ಭಿತವಾಗಿ ವ್ಯಕ್ತವಾಗುವುದು ಮಾತನಾಡುವ ಮೌನದಲಿ

Friday, December 5, 2008

ಕನ್ನಡಿ

ಕನ್ನಡಿಯೊಳಗೆ ಕಾಣುವ ಮುಖಾರವಿಂದ ನೋಡಲು ಅದ್ಭುತ
ಕನ್ನಡಿಯೂ ಬಯಸಿತು ಆ ಮುಗ್ಧ ಚೆಹರೆಗೆ ಸ್ವಾಗತ
ಅಂತರಾಳದ ಸಿಹಿ-ಕಹಿಗಳು ಕಾಣುವುದಿಲ್ಲ ಆ ಕೈಪಿಡಿಯಲಿ
ತೊಡಗೋಣ ಕೆಲ ಕ್ಷಣ, ನಮ್ಮೊಳಗಿನ ಕಹಿಯ ಅನ್ವೇಷಣೆಯಲಿ

Thursday, December 4, 2008

ಪ್ರಕೃತಿ

ಹುಣ್ಣಿಮೆಯಂದು ಹುಚೆದ್ದು ದಡಕ್ಕೆ ಬಡಿಯುವವು ಸಾಗರದ ಅಲೆಗಳು
ತಂಗಾಳಿ ಬೀಸಿದೊಡನೆ ಪಟ-ಪಟನೆ ತೇಲಿ ನಲಿದಾಡುವವು ಎಲೆಗಳು
ಮುಗುಳ್ನಗೆ ಮಾತ್ರದಿಂದಲೇ ಬಡಿತ ಹೆಚ್ಹಿಸಿ ಒಂದಾಗುವವು ಹೃದಯಗಳು
ಈ ವಿಸ್ಮಯವೇನು ಪ್ರಕೃತಿಯ ಚೆಲುವೋ, ಇಲ್ಲ ಭಾವನೆಗಳ ಸುಳಿಯೋ?

Monday, December 1, 2008

ನಾ - ನೀ

ನನ್ನ ಹಾಡು ನನ್ನದಲ್ಲ, ನೀ ತಂದ ಕನಸುಗಳು
ನನ್ನ ನೋಟ ನನ್ನದಲ್ಲ, ನಿನ್ನ ಕಣ್ಣ ಬಿಂಬಗಳು
ನನ್ನ ಹೃದಯವೊಂದು ವೀಣೆ, ನುಡಿವುದು ನಿನ್ನ ಸ್ವರಗಳು
ನನ್ನ ಬದುಕು ಒಂದು ದೋಣಿ, ನಿನ್ನ ನೆನಪು ಸಾಕು ದಡ ಸೇರಲು

ಸುಳಿ

ಮನದ ಅಂತರಾಳದಲ್ಲಿ ಹಾಡೊಂದು ಮೂಡಿತು
ನನ್ನ ಹೃದಯ ಬಡಿತದವಿಂದು ನಿನ್ನ ನೆನಪು ತಂದಿತು
ಕಳೆದು ಹೋದ ಚಿತ್ರಗಳು ಕಣ್ಣ ಮುಂದೆ ಕಂಡಿತು
ಕನಸುಯೆಂಬ ತುಂಬು ದೋಣಿ ಸುಳಿಗೆ ಸಿಕ್ಕಿ ಮುಳುಗಿತು

ಮಳೆ

ಎಂಥ ವಿಸ್ಮಯವೀ ಪ್ರಕೃತಿಯು ಸುರಿಸಿದ ಮಣಿಮುತ್ತುಗಳು
ಪತರಗುಟ್ಟಿದವು ರೆಕ್ಕೆಗಳು, ಪುಳಕಿತಗೊಂಡವು ಎಲೆ-ಗರಿಗಳು
ಒಂದೆದೆಯಲಿ ಕದಡಿ ನೀರಿನಲಿ ಮೇಲ್ಮುಖಗೊಂಡವು ಮನದ ದುಗುಡಗಳು
ಮತ್ತೊಂದೆದೆಯಲಿ, ಸುರಿದ ನೀರಿಂದ ಚಿಗುರಿ ನಲಿದವು ಹೊಸ ಭಾವನೆಗಳು

ದಾರುಣ - ಮುಂಬೈ ಹತ್ಯೆಗಳ ಕಥನ

ರವಿಯು ಕಿಡಿಗಾರಿ ಸೃಷ್ಟಿಯಾದ ಭುವಿ
ಅವನ ಸುತ್ತ ತಿರುಗಿ ತೀರಿಸ ಹೊರಟಿತು ಋಣವ
ಇಲ್ಲೇ ಹುಟ್ಟಿ ಬೆಳೆದು ನಲಿದಾಡುವ ನಾವು
ಕೊಂಚ ತೀರಿಸೋಣ ನಮ್ಮ ಋಣವ
ನಿಲ್ಲಿಸಿ ಈ ದಾರುಣವ.....ನಿಲ್ಲಿಸಿ ಈ ದಾರುಣವ...