Wednesday, December 16, 2009

ವಸುಂಧರೆ


ನೆತ್ತರ ಸುರಿದರು, ಕಂಬನಿಗೈದರು
ಸೃಷ್ಟಿಸಲಾರೆವು ಕಿಂಚಿತ್ ಭೂಮಿಯನು

ಇರುವ ಒಂದು ಜನುಮದಲಿ
ಸಾವಿನ ಹೆಡೆಯ ನೆರಳಿನಲಿ
ಕೊಚ್ಚಿ ಕೆಡವಿದೆವು ಪ್ರಕೃತಿಯನು
ನಮ್ಮ ಸ್ವಾರ್ಥದ ನಲಿವಿನಲಿ

ಮುನಿಸಿಕೊಳ್ಳದೆ, ನೋವಿನಿಂದ ತತ್ತರಿಸದೆ
ನೀಡುತಿಹಳು ನಮಗೆ ಅನ್ನ-ಧನ
ಬಿಕ್ಕುತಿಹಳು ಭೂತಾಯಿ ನೋವಿನಿಂದಲಿ
ಅವಳೆಡೆಗೆ ಕೊಂಚ ಮಿಡಿಯಲಿ ನಮ್ಮೆಲ್ಲರ ಮನ

Wednesday, December 2, 2009

ಕಾಲೇಜ್ ನೆನಪು

ಈ ಹುಡ್ಗೀರ್ ಮಾತನ್ ನಂಬೆಡಾಂತ ಅಮ್ಮ ಹೇಳ್ತಿದ್ಲು
ಆ ಹುಡುಗಿ ಮಾತ್ರ ಕಾಲೇಜ್ನಲ್ಲಿ ಅವನ್ನೇ ನೋಡ್ತಿದ್ಲು

ನೋಡಿ ಆ ಹುಡುಗಿ ನಗೆ
ನಮ್ಮುಡ್ಗ ಹಾಕ್ಕೊಂಡ ಹೊಗೆ
ಅವನಿಗೆ ಬಿದ್ದ ಧರ್ಮದೇಟು ಬಗೆ ಬಗೆ
ಆದರು ಅವನಿಗ್ ಮ್ಯಾಜಕ್ಕು ಆ ಹುಡುಗಿ ಮುಗುಳ್ನಗೆ

ಪಾಪ ಬಸವ ತಬ್ಬಿಬ್ಬಾದ
ಅವಳ್ ಮನಸ್ನ ತಿಳಿಯದಾದ
ಬೇರೆ ಹುಡ್ಗೀರ್ನ ನೋಡದಂಗಾದ
ತಿಳಿದೆ ಅವಳ ಬಳಿ ಜಾರ್ತ ಹೋದ

ಕಾಲೇಜ್ ಇರೋದ್ ಕಲ್ಯೋಕ್ಕಂತ
ಪರ್ಪಂಚ ಇರೋದ್ ಅನ್ಭವಿಸೋಕ್ಕಂತ
ಹುಡ್ಗೀರ್ ಇರೋದ್ ನೋದೊಕ್ಕಂತ
ವಯಸ್ಸಾದ ಮೇಲೆ ಇದ್ದೆ ಇದೆ ಬರಿ ಏಕಾಂತ

---ರಮೇಶ ಎಸ್ ಎನ್---

Tuesday, October 20, 2009

ನಿನ್ನ ನೋಡುವ ಮೊದಲೇ...

ನಿನ್ನ ನೋಡುವ ಮೊದಲೇ ದೇವರ ಬೇಡಿದೆ
ನಿನ್ನನು ನನ್ನ ಸಂಗಾತಿ ಮಾಡೆಂದು
ಕಣ್ ಸೇರುವ ಮೊದಲೇ ನಿನಗಾಗಿ ಹಾಡಿದೆ
ಹೃದಯವು ಪಿಸುಗುಟ್ಟಿದ ಸವಿಮಾತೊಂದು

ಕಂಗಳ ಮುಂದೆ ನೀ ನಿಂತ ಹಾಗೆ
ಕಣ್ ಮುಚ್ಚಲು ಕನಸಲಿ ನೀ ಬಂದೆ ಹೇಗೆ
ನೀನಿಲ್ಲದ ಬಾಳು ಬರಿ ಶೂನ್ಯ ನನಗೆ
ಬಂದು ಸೇರಿ ತೀರಿಸು ಈ ಮನದ ಬೇಗೆ

ನಿನ್ನ ನೋಡುವ ಮೊದಲೇ...

ಕನಸುಗಳು ಮಾತಾಗಲು ಬಣ್ಣಿಸಲಾಗದು ಪ್ರೀತಿಯನು
ಹೂವೊಂದು ಹೆಣ್ಣಾಗಲು ಪಡೆಯಲಾರದು ನಿನ್ನಂದವನು
ಕಾಯಿಸಿ ಕೊಲ್ಲದಿರು ನನ್ನ ಹೀಗೆ, ತೋರಲಾರೆ ನನ್ನ ಹೃದಯವನು
ನನ್ನ ಉಸಿರಿನೊಂದಿಗೆ ಹರಿದು ಬಂದು ಸೇರು ನನ್ನಾಂತರ್ಯವನು

ನಿನ್ನ ನೋಡುವ ಮೊದಲೇ....

-----ರಮೇಶ ಎಸ್ ಏನ್-----

Monday, August 10, 2009

ಪ್ರೀತಿಯಿರಲಿ ಬದುಕಿನಲಿ

ಏನಿದ್ದರೇನು ಮನೆಯಲಿ
ಪ್ರೀತಿಯಿರಬೇಕು ಬದುಕಿನಲಿ

ಕದಡಿದ ಕೆಸರಿನಂತೆ
ಒಡೆದ ಹಾಲಿನಂತೆ
ಮೋಡ ಕವಿದ ಆಗಸದಂತೆ
ಎಲ್ಲರ ಮನವ ಕವಿದಿಹುದು ಚಿಂತೆ

ಏನಿದ್ದರೇನು.............

ಮರವನಪ್ಪಿದ ಬಳ್ಳಿಯಂತೆ
ಹೂವ ಚುಂಬಿಸುವ ದುಂಬಿಯಂತೆ
ಕೊಳಲಿಗೊಲಿದ ನಾದದಂತೆ
ಪ್ರೀತಿ ಬೆಳೆಯಲಿ ಮಗುವಿನ ನಗುವಿನಂತೆ

ಏನಿದ್ದರೇನು.............

Tuesday, March 3, 2009

ಬಾ ಗೆಳತಿ

ಬಾ ಗೆಳತಿ
ನನ್ನೀ ಕನಸನು ನನಸಾಗಿಸಲು
ಬಾ ಗೆಳತಿ

ನನ್ನೀ ಕಂಗಳು ಕಾಣುವ ನೋಟ
ಕನಸಲಿ ನೀನೆ ಕಲಿಸಿದ ಪಾಠ
ಹೃದಯದ ಮುಖಪುಟ ನೀನೆ ಗೆಳತಿ
ಕತ್ತಲ ಬಾಳಿಗೆ ನೀನೆ ಹಣತೆ

ಬಾ ಗೆಳತಿ....

ನಿನ್ನದೇ ಧ್ಯಾನ ಪ್ರತಿ ಕ್ಷಣ ನನಗೆ
ಏತಕೆ ಬಾರದು ಕರುಣೆಯು ನಿನಗೆ
ಮನಸಿನ ಕವಿತೆಯ ಪಲ್ಲವಿ ನೀನು
ಕನಸು ನನಸಾಗಲು ಕಾದಿಹೆ ನಾನು

ಬಾ ಗೆಳತಿ
ನನ್ನೀ ಕನಸನು ನನಸಾಗಿಸಲು
ಬಾ ಗೆಳತಿ

Thursday, February 19, 2009

बचपन की यादें

भूलके भी भूल नही सकते हैं वोह यादें
वोह बचपना और वोह मासूम सी बातें
दिल चाहता है लौटकर जाने को उन दिनों में
शायद अब यह मुमकिन हैं सिर्फ़ गहरी नींद के सपनो में

--------------रमेशा एस एन् ------------