Tuesday, October 20, 2009

ನಿನ್ನ ನೋಡುವ ಮೊದಲೇ...

ನಿನ್ನ ನೋಡುವ ಮೊದಲೇ ದೇವರ ಬೇಡಿದೆ
ನಿನ್ನನು ನನ್ನ ಸಂಗಾತಿ ಮಾಡೆಂದು
ಕಣ್ ಸೇರುವ ಮೊದಲೇ ನಿನಗಾಗಿ ಹಾಡಿದೆ
ಹೃದಯವು ಪಿಸುಗುಟ್ಟಿದ ಸವಿಮಾತೊಂದು

ಕಂಗಳ ಮುಂದೆ ನೀ ನಿಂತ ಹಾಗೆ
ಕಣ್ ಮುಚ್ಚಲು ಕನಸಲಿ ನೀ ಬಂದೆ ಹೇಗೆ
ನೀನಿಲ್ಲದ ಬಾಳು ಬರಿ ಶೂನ್ಯ ನನಗೆ
ಬಂದು ಸೇರಿ ತೀರಿಸು ಈ ಮನದ ಬೇಗೆ

ನಿನ್ನ ನೋಡುವ ಮೊದಲೇ...

ಕನಸುಗಳು ಮಾತಾಗಲು ಬಣ್ಣಿಸಲಾಗದು ಪ್ರೀತಿಯನು
ಹೂವೊಂದು ಹೆಣ್ಣಾಗಲು ಪಡೆಯಲಾರದು ನಿನ್ನಂದವನು
ಕಾಯಿಸಿ ಕೊಲ್ಲದಿರು ನನ್ನ ಹೀಗೆ, ತೋರಲಾರೆ ನನ್ನ ಹೃದಯವನು
ನನ್ನ ಉಸಿರಿನೊಂದಿಗೆ ಹರಿದು ಬಂದು ಸೇರು ನನ್ನಾಂತರ್ಯವನು

ನಿನ್ನ ನೋಡುವ ಮೊದಲೇ....

-----ರಮೇಶ ಎಸ್ ಏನ್-----

1 comment:

Ramesha said...

I had written this long back and saved it somewhere. I could trace it today and hence posting it :-)