Wednesday, December 16, 2009

ವಸುಂಧರೆ


ನೆತ್ತರ ಸುರಿದರು, ಕಂಬನಿಗೈದರು
ಸೃಷ್ಟಿಸಲಾರೆವು ಕಿಂಚಿತ್ ಭೂಮಿಯನು

ಇರುವ ಒಂದು ಜನುಮದಲಿ
ಸಾವಿನ ಹೆಡೆಯ ನೆರಳಿನಲಿ
ಕೊಚ್ಚಿ ಕೆಡವಿದೆವು ಪ್ರಕೃತಿಯನು
ನಮ್ಮ ಸ್ವಾರ್ಥದ ನಲಿವಿನಲಿ

ಮುನಿಸಿಕೊಳ್ಳದೆ, ನೋವಿನಿಂದ ತತ್ತರಿಸದೆ
ನೀಡುತಿಹಳು ನಮಗೆ ಅನ್ನ-ಧನ
ಬಿಕ್ಕುತಿಹಳು ಭೂತಾಯಿ ನೋವಿನಿಂದಲಿ
ಅವಳೆಡೆಗೆ ಕೊಂಚ ಮಿಡಿಯಲಿ ನಮ್ಮೆಲ್ಲರ ಮನ

Wednesday, December 2, 2009

ಕಾಲೇಜ್ ನೆನಪು

ಈ ಹುಡ್ಗೀರ್ ಮಾತನ್ ನಂಬೆಡಾಂತ ಅಮ್ಮ ಹೇಳ್ತಿದ್ಲು
ಆ ಹುಡುಗಿ ಮಾತ್ರ ಕಾಲೇಜ್ನಲ್ಲಿ ಅವನ್ನೇ ನೋಡ್ತಿದ್ಲು

ನೋಡಿ ಆ ಹುಡುಗಿ ನಗೆ
ನಮ್ಮುಡ್ಗ ಹಾಕ್ಕೊಂಡ ಹೊಗೆ
ಅವನಿಗೆ ಬಿದ್ದ ಧರ್ಮದೇಟು ಬಗೆ ಬಗೆ
ಆದರು ಅವನಿಗ್ ಮ್ಯಾಜಕ್ಕು ಆ ಹುಡುಗಿ ಮುಗುಳ್ನಗೆ

ಪಾಪ ಬಸವ ತಬ್ಬಿಬ್ಬಾದ
ಅವಳ್ ಮನಸ್ನ ತಿಳಿಯದಾದ
ಬೇರೆ ಹುಡ್ಗೀರ್ನ ನೋಡದಂಗಾದ
ತಿಳಿದೆ ಅವಳ ಬಳಿ ಜಾರ್ತ ಹೋದ

ಕಾಲೇಜ್ ಇರೋದ್ ಕಲ್ಯೋಕ್ಕಂತ
ಪರ್ಪಂಚ ಇರೋದ್ ಅನ್ಭವಿಸೋಕ್ಕಂತ
ಹುಡ್ಗೀರ್ ಇರೋದ್ ನೋದೊಕ್ಕಂತ
ವಯಸ್ಸಾದ ಮೇಲೆ ಇದ್ದೆ ಇದೆ ಬರಿ ಏಕಾಂತ

---ರಮೇಶ ಎಸ್ ಎನ್---