Wednesday, December 8, 2010

नन्ही सी जान !! (ನಮ್ಮ ಪ್ರೀತಿಯ ಮಗುವಿಗಾಗಿ)


जैसे उजाला लाता है सूरज दिन में
जैसे ज़िन्दगी खिलता है बारिश के मौसम में !
एक नन्ही सि जान जो अब है जान हमारी
लाया है खुशियों के बहार हमारी ज़िन्दगी में !!
 
ಕನ್ನಡದಲ್ಲಿ ಇದರ ಅನುವಾದ ಹೀಗಿರಬಹುದು:
 
ಸೂರ್ಯನು ತನ್ನ ಕಿರಣಗಳಿಂದ ಹೇಗೆ ಬೆಳಕು ಚೆಲ್ಲುವನೋ
ವರ್ಷ ರುತುವಿನಲ್ಲಿ ಹೇಗೆ ಜೀವಗಳು ಅರಳುತ್ತವೆಯೋ
ಒಂದು ಸಣ್ಣ ಜೀವವದು, ಆಗಿಹುದೀಗ ನಮ್ಮ ಜೀವ
ತಂದಿಹುದು ಬದುಕಿನಲಿ ಸುಖ-ಸಂತಸಗಳ ಮಹಾಭಾವ

Wednesday, October 6, 2010

अश्कों के आवाज़ (ಕಣ್ಣೀರಿನ ಸದ್ದು)

प्यार जब रोशन होता हैं
तो आँखों में दिखाई देता हैं !
मोहब्बत में डूबे हुए दिलोंको अक्सर
अश्कों के गिरने की आवाज़ भी सुनाई देता हैं !!

ಕನ್ನಡದಲ್ಲಿ ಈ ಶಾಯರಿಯ ಅನುವಾದ ಪ್ರಾಯಶಃ ಹೀಗಿರಬಹುದು:

ಪ್ರೀತಿಯೆಂಬ ಬೆಳಕು ಚೆಲ್ಲಿದಾಗ
ಕಣ್ಣಿನಲ್ಲಿ ಕಾಣಿಸಿಕೊಳ್ಳುವುದು !
ಪ್ರೇಮದ ಕೊಳದಲ್ಲಿ ಮುಳುಗಿದ ಹೃದಯಗಳಿಗೆ
ಒಂದು ಹನಿ ಕಣ್ಣೀರು ಬಿದ್ದರೂ ಅದರ ಸದ್ದು ಕೇಳುವುದು !!

Wednesday, September 22, 2010

ಮಾನಸ ಗಂಗ

ಆತ್ಮೀಯ ಸ್ನೇಹಿತರೆ,

ನಿಮ್ಮೆಲ್ಲರ ಪ್ರೋತ್ಸಾಹ ಮತ್ತು ಅಭಿಮಾನದಿಂದಾಗಿ ನಾನು ಹೊಸದೊಂದು ಬ್ಲಾಗ್ ಪ್ರಾರಂಭಿಸಿದ್ದೇನೆ. ಅದೇ "ಮಾನಸ-ಗಂಗ". ಅದರಲ್ಲಿ ನನ್ನ ಹಿಂದಿ ಬರಹಗಳನ್ನು ಮಾತ್ರ ಪೋಸ್ಟ್ ಮಾಡಬೇಕೆಂದು ಇಚ್ಚಿಸಿದ್ದೇನೆ. ನನ್ನ "ಹೃದಯಾಂತರಾಳ"ವನ್ನು ಕನ್ನಡ ಕವಿತೆಗಳಿಗೆ ಮಾತ್ರ ಸೀಮಿತಗೊಳಿಸಲು ತೀರ್ಮಾನಿಸಿದ್ದೇನೆ. ನೀವೆಲ್ಲರೂ ನನ್ನ "ಮಾನಸ ಗಂಗ" ಹಾಗು "ಹೃದಯಾಂತರಾಳ"ವನ್ನು ಪ್ರೀತಿಸೆ ಪ್ರೋತ್ಸಾಹಿಸುತ್ತೀರಿ ಎಂದು ನಂಬಿದ್ದೇನೆ.

ಮಾನಸ-ಗಂಗೆಯ ಲಿಂಕ್ ಇಲ್ಲಿದೆ http://manasa-ganga.blogspot.com/ 

ಇಂತಿ ನಿಮ್ಮವ,
ರಮೇಶ

Tuesday, August 10, 2010

बंदिश

तुम्हारी दिल में पनाह मिलजाए
इस्से ज्यादा कोई ख्वाहिश नहीं !
गूंजती रहे तुम्हारी मीठे बोल अपनी कानो में
इस्से बढ़कर कोई बंदिश नहीं !!

Friday, July 9, 2010

साया

यादों के सहारे जीते थे हम
तुम्हारी ही खयालो में हस्ते थे हम !
बिखरे थे कितने दर्द भरे वोह दास्तान
फिर भी अंधेरे में साया ढूंडते थे हम !!

---एस एन रमेशा -------

Tuesday, June 1, 2010

ನನ್ನಾk

ಬರಭೂಮಿಯಂತಿದ್ದ ಮನದಿ
ಭಾವನೆಗಳ ಪೈರು ಬೆಳೆದಂತೆ
ನಿನ್ನ ನೆನಪುಗಳು ನನಗೆ !


ದಣಿದ ಭುವಿಯ ಮೆಲೆ
ತಂಪಾಗಿಸುವ ಮಳೆಹನಿಯಂತೆ
ನಿನ್ನ ಸ್ಪರ್ಶವು ನನಗೆ !!

ಬಿಸಿಲ ತಾಪದಿ ಬೆಂದು
ಗಲ್ಲವ ಬೆವರು ಚುಂಬಿಸಲು
ಬೀಸಿದ ತಂಗಾಳಿ ನಿನ್ನುಸಿರು ನನಗೆ !

ಬೆಳದಿಂಗಳ ಚಂದ್ರಮನ
ದಟ್ಟ ಕಾರ್ಮೋಡ ಕವಿದಂತೆ
ನಿನ್ನಗಲಿಕೆಯು ನನಗೆ !!
-----ರಮೇಶ ಎಸ್ ಎನ್-------

Wednesday, May 5, 2010

बिन तेरे

बिन तेरे न हो कोई सवेरा
बिन तेरे यादोंके न हो अपना बसेरा !
वोह दिन आये अगर जिसमे न हो आवाज़ तेरे कंगन के
यह दिल थम जाए वोही पे बिना कोई धड़कन के !!

Tuesday, March 23, 2010

तन्हाई

सामने जब होती नहीं हो तुम
कुछ अधूरे से होजाते हैं हम !
बहती अश्कों में हैं दिल की बातें समायी
आखिर कितनी गहरी है यह तन्हाई !!

--------रमेशा एस एन ----

Thursday, March 11, 2010

ಅಮ್ಮ

ನನ್ನ ಕಣ್ಣ ಮಧ್ಯೆಯಿರುವ ಕೇಂದ್ರಬಿಂದು ನೀನು
ನಿನ್ನ ಎದೆಯ ಜೇನು ಸವಿದ ಪುಟ್ತ ದುಂಬಿ ನಾನು

ಕರುಳ ಬಳ್ಳಿಯಿಂದ ನನ್ನ
ಹಸಿವನಡಗಿಸಿದೆ ನೀನು
ಅಪ್ಪಿ ಹಿಡಿದು ತೊಳ್ಗಳಲ್ಲಿ
ಅಮ್ರುತವನುಣಿಸಿದೆ ನೀನು
ಅಮ್ಮಯೆಂದು ಕರೆದಾಕ್ಷಣ
ನನ್ನನರಸಿ ಬಂದೆ ನೀನು
ನೋವುಗೊಂಡು, ಕಣ್ಣೀರನುಂಡು
ನನ್ನ ಕಣ್ಣೊರೆಸಿದ ದೇವಿ ನೀನು


ನೀನಿತ್ತ ಉಸಿರಿನಿಂದ ಬೆಳೆದೆ
ನಾನೆಂಬ ಭಾವವನ್ನು ಬೆರೆತೆ
ಜಗದ ನಿಯಮಗಳನು ಅರಿತೆ
ನಿನ್ನ ನೆನೆದು ನೋವ ಮರೆತೆ
ನಿನ್ನ ಮೀರಿದ ದೈವವಿಲ್ಲ
ನಿನಗೆ ಮುಡಿಪು ನನ್ನ ಜೀವನವೆಲ್ಲ
ಕೈಹಿಡಿದು, ಮರ್ಗದರ್ಶಿಯಾಗಿ ನಿಲ್ಲೆ
ನೀನೆ ನನ್ನ ಬಾಳ ನೆಲೆ

ನಿನ್ನ ಗರ್ಭತೊಟ್ಟಿಲಲ್ಲಿ
ನಿಶ್ಚಿಂತನಾಗಿ ನಾನು ಬೆಳೆದೆ
ಇಹ ಕರ್ಮಭೂಮಿಯಲ್ಲಿ ದಿನವು
ಚಿಂತೆಯಿಂದ ನಾನು ಕಳೆದೆ
ಬಿಚ್ಚಿ ನಿನ್ನ ತೊಳನೊಮ್ಮೆ
ಬಾಚಿ ತಬ್ಬು ನನ್ನನೊಮ್ಮೆ
ನೋವ ಮರೆವೆ, ನಿನ್ನನರಿವೆ
ದೇವಿ ನಿನ್ನ ತೊಡೆಯನೇರುವೆ

----ರಮೇಶ ಎಸ್ ಎನ್ -----

Monday, March 8, 2010

चाहत

चाहते हैं तुम्हे इस तरह से
बातों में बयान करे किस तरह से !
दिल कि धडकनों में बसे हो सिर्फ तुम
दिल से दिल तक कि दूरी मिटाए हम किस तरह से !!

-----रमेशा एस एन -----

Wednesday, February 24, 2010

गुज़ारिश

गुज़ारिश है खुदा से कि
आपकी ज़िन्दगी में ख़ुशी कम न हो !
पलकों को अगर छूले आंसू
तो उसकी वजह कभी हम न हो !!

ಹಿಂದಿ ಭಾಷೆಯಲ್ಲಿ ಬರೆದು ಬಹಳ ದಿನಗಳಾಗಿತ್ತು. ಈಗ ಮತ್ತೊಮ್ಮೆ ನನ್ನ ಹಿಂದಿ ಲೇಖನಗಳನ್ನು ನಿಮ್ಮ ಮುಂದೆ ಇಡುವ ಪ್ರಯತ್ನ ಮಾಡುತ್ತಿದ್ದೇನೆ. ನಿಮಗೆ ಕೊಂಚವಾದರೂ ಈ ಲೇಖನಗಳು ಖುಷಿ ಕೊಟ್ಟರೆ ಅಷ್ಟೇ ಸಾಕು.
----ರಮೇಶ ಎಸ್ ಎನ್ ----------

Friday, February 19, 2010

ಕಾಣದ ದೈವ

ಉಪ್ಪಿನ ನೀರಿಗೆ
ಉಕ್ಕುವ ಕಲೆಯನು ಕಲಿಸಿದರ್ಯಾರಿಲ್ಲಿ
ಉಕ್ಕುವ ನೀರಿಗೆ
ಉಪ್ಪಿನ ರುಚಿಯನು ಉಣಿಸಿದರ್ಯಾರಿಲ್ಲಿ

ಮುಂಜಾನೆ ಮೊಗ್ಗಿಗೆ
ಅರಳುವ ಮನಸನು ಕೊಟ್ಟವರ್ಯಾರಿಲ್ಲಿ
ಆ ಅರಳಿದ ಹೂವಿಗೆ
ದುಂಬಿಯ ಸೆಳೆಯುವ ಪರಿಮಳವಿತ್ತವರ್ಯಾರಿಲ್ಲಿ

ಹಾರುವ ಹಕ್ಕಿಗೆ
ಗೂಡಿನ ವಿಳಾಸವ ತಿಳಿಸಿದರ್ಯಾರಿಲ್ಲಿ
ಸೂರ್ಯನ ಕಿರಣಕೆ
ಬೆಳಕನು ಚೆಲ್ಲುವ ಶಕ್ತಿಯನಿತ್ತವರ್ಯಾರಿಲ್ಲಿ

ಕಣ್ಣಿನ ನೋಟಕೆ
ಹೃದಯವ ಹೊಕ್ಕುವ ಬಲವನಿತ್ತವರ್ಯಾರಿಲ್ಲಿ
ಹುಡುಗಾಟದ ಮನಸಿಗೆ
ತಾಯಿಯ ಹೃದಯವ ಕರುಣಿಸಿದರ್ಯಾರಿಲ್ಲಿ
------ಎಸ್ ಎನ್ ರಮೇಶ -----

Friday, January 29, 2010

ಕಾಲು ದಾರಿಯ ಹೂವು !!

ಕಾಲು ದಾರಿಯಲೊಂದು
ಅರಳಿ ನಿಂತ ಹೂವು
ಕಯುತಲಿದೆ ಮುಡಿವ ತುರುಬಿಗೆ
ತುಳಿತಕೆ ಸಿಲುಕಿ ಬರುವ ಮುನ್ನ ಸಾವು

ಮುದುಡಿದೆ ಅರಳಿದ ಹೂವಿನ ಮನವು
ಬಳಲಿದೆ ಬಿಸಿಲಲಿ ಅದರ ಮೊಗವು
ತುರುಬನೇರುವ ಮುನ್ನ ಕಾಡುತಿದೆ ಕಾಲ್-ತುಳಿತವು
ಆಲಂಗಿಸುವ ಕೈಗಳಿಲ್ಲದೇ ಗಾಳಿ ಪಾಲಾಗಿದೆ ಸುಗಂಧವು
--------ರಮೇಶ ಎಸ್ ಎನ್ --------

Wednesday, January 13, 2010

ಕವಿ-ನಮನ

ಕೇಳುಗರ ಮನದಿ ಚಿತ್ತಾರ ಬಿಡಿಸುವ
ಪದಗಳ ಅರ್ಥಗಳನು ಬಣ್ಣಿಸುತ ಮೋಹಿಸುವ
ಎದೆಯ ಒಳಗಿನ ತುಡಿತ-ಮಿಡಿತಗಳ ಹೆಕ್ಕುವ
ಮನದೊಳಗೊಂದು ನವ-ಯುಗವ ಅವ ಸೃಷ್ಟಿಸುವ!!

ಹಕ್ಕಿಯ ಚಿಲಿ-ಪಿಲಿಯಲಿ ವಿನೋದವ ಕಾಣುವ
ಸಿಹಿಯ ಲೇಪನದಿ ವಿಷಾದವ ಸಾರುವ
ತನ್ನ ಪದಶಕ್ತಿಯಿಂದಲೇ ಅನ್ವೇಷಣೆಯತ್ತ ಒಯ್ಯುವ
ಅಂತಹ ವರಕವಿಗಳಿಗೆ ನಮ್ಮ ನಮನ ಸಲ್ಲಿಸುವ!!

----ರಮೇಶ ಎಸ್ ಎನ್