Friday, January 29, 2010

ಕಾಲು ದಾರಿಯ ಹೂವು !!

ಕಾಲು ದಾರಿಯಲೊಂದು
ಅರಳಿ ನಿಂತ ಹೂವು
ಕಯುತಲಿದೆ ಮುಡಿವ ತುರುಬಿಗೆ
ತುಳಿತಕೆ ಸಿಲುಕಿ ಬರುವ ಮುನ್ನ ಸಾವು

ಮುದುಡಿದೆ ಅರಳಿದ ಹೂವಿನ ಮನವು
ಬಳಲಿದೆ ಬಿಸಿಲಲಿ ಅದರ ಮೊಗವು
ತುರುಬನೇರುವ ಮುನ್ನ ಕಾಡುತಿದೆ ಕಾಲ್-ತುಳಿತವು
ಆಲಂಗಿಸುವ ಕೈಗಳಿಲ್ಲದೇ ಗಾಳಿ ಪಾಲಾಗಿದೆ ಸುಗಂಧವು
--------ರಮೇಶ ಎಸ್ ಎನ್ --------

Wednesday, January 13, 2010

ಕವಿ-ನಮನ

ಕೇಳುಗರ ಮನದಿ ಚಿತ್ತಾರ ಬಿಡಿಸುವ
ಪದಗಳ ಅರ್ಥಗಳನು ಬಣ್ಣಿಸುತ ಮೋಹಿಸುವ
ಎದೆಯ ಒಳಗಿನ ತುಡಿತ-ಮಿಡಿತಗಳ ಹೆಕ್ಕುವ
ಮನದೊಳಗೊಂದು ನವ-ಯುಗವ ಅವ ಸೃಷ್ಟಿಸುವ!!

ಹಕ್ಕಿಯ ಚಿಲಿ-ಪಿಲಿಯಲಿ ವಿನೋದವ ಕಾಣುವ
ಸಿಹಿಯ ಲೇಪನದಿ ವಿಷಾದವ ಸಾರುವ
ತನ್ನ ಪದಶಕ್ತಿಯಿಂದಲೇ ಅನ್ವೇಷಣೆಯತ್ತ ಒಯ್ಯುವ
ಅಂತಹ ವರಕವಿಗಳಿಗೆ ನಮ್ಮ ನಮನ ಸಲ್ಲಿಸುವ!!

----ರಮೇಶ ಎಸ್ ಎನ್