Friday, February 19, 2010

ಕಾಣದ ದೈವ

ಉಪ್ಪಿನ ನೀರಿಗೆ
ಉಕ್ಕುವ ಕಲೆಯನು ಕಲಿಸಿದರ್ಯಾರಿಲ್ಲಿ
ಉಕ್ಕುವ ನೀರಿಗೆ
ಉಪ್ಪಿನ ರುಚಿಯನು ಉಣಿಸಿದರ್ಯಾರಿಲ್ಲಿ

ಮುಂಜಾನೆ ಮೊಗ್ಗಿಗೆ
ಅರಳುವ ಮನಸನು ಕೊಟ್ಟವರ್ಯಾರಿಲ್ಲಿ
ಆ ಅರಳಿದ ಹೂವಿಗೆ
ದುಂಬಿಯ ಸೆಳೆಯುವ ಪರಿಮಳವಿತ್ತವರ್ಯಾರಿಲ್ಲಿ

ಹಾರುವ ಹಕ್ಕಿಗೆ
ಗೂಡಿನ ವಿಳಾಸವ ತಿಳಿಸಿದರ್ಯಾರಿಲ್ಲಿ
ಸೂರ್ಯನ ಕಿರಣಕೆ
ಬೆಳಕನು ಚೆಲ್ಲುವ ಶಕ್ತಿಯನಿತ್ತವರ್ಯಾರಿಲ್ಲಿ

ಕಣ್ಣಿನ ನೋಟಕೆ
ಹೃದಯವ ಹೊಕ್ಕುವ ಬಲವನಿತ್ತವರ್ಯಾರಿಲ್ಲಿ
ಹುಡುಗಾಟದ ಮನಸಿಗೆ
ತಾಯಿಯ ಹೃದಯವ ಕರುಣಿಸಿದರ್ಯಾರಿಲ್ಲಿ
------ಎಸ್ ಎನ್ ರಮೇಶ -----

12 comments:

ಸವಿಗನಸು said...

ಚೆಂದದ ಕವನ...

ಗೌತಮ್ ಹೆಗಡೆ said...

wah nice:)dv.gundappanavara ondu kavana nenapaaytu e kavana oadi..

ಸಾಗರದಾಚೆಯ ಇಂಚರ said...

ಕಾಣದ ದೈವದ ಬಗೆಗೆ ಒಳ್ಳೆಯ ಸಾಲುಗಳು
;;ಎಲ್ಲೋ ಹುಡುಕಿದೆ ಇಲ್ಲದ ದೇವರ'' ಪದ್ಯದ ಸಾಲುಗಳು ನೆನಪಾದವು

Inspiration said...

ಸುಂದರ ಪರಿಕಲ್ಪನೆ :). ನಿಜವಾಗಿಯೂ ಪ್ರಕೃತಿಯನ್ನು ನೋಡಿದಾಗ ಅದೆಷ್ಟು ಇಲ್ಲಾ ಅಂದ್ರು ದೇವರಲ್ಲಿ ನಂಬಿಕೆ ಬಂದು ಬಿಡುತ್ತೆ, ಅಲ್ವೆ?

Ramesha said...

dhanyavaadagalu Mahesh...

Ramesha said...

Goutham.. nimage nanna ee blog prapanchakke susvagatha... mattu nanna kavana oadi nimage DVG gnapaka banthu annodu ondu santasada vishaya... avara yettaravannu inuki noduvudu asadhyada kelasa.. adaru nimma abhimaana haagu protsahakke dhanyavaadagalu.. :)

Ramesha said...

Gurumurthy avare... Janapriyavaada haadina saalugalu nimage nenapadavu annodanna keli santosha aytu... dhanyavaadagalu.. heege bartiri nanna blog ge...

Ramesha said...

Spoorthy... nimma anisikegalannu vyaktha padisiddakke thanks... :)

ಗುರು-ದೆಸೆ !! said...

'Ramesha' ಅವ್ರೆ..,

ಇದೆಲ್ಲ ಕಾಣದ ಕೈಯ ಕೆಲಸ...


Blog is Updated:http://manasinamane.blogspot.com

Anonymous said...

Hello!!
Read this poem aloud and enjoyed it. the verse rolls easy on the tongue and has a nice tempo, nice and simple words
thanks
:-)
malathi S

Ramesha said...

Malathi.. Thanks a lot for your comment..

Raghu said...

nice lines...
Raaghu