Thursday, March 11, 2010

ಅಮ್ಮ

ನನ್ನ ಕಣ್ಣ ಮಧ್ಯೆಯಿರುವ ಕೇಂದ್ರಬಿಂದು ನೀನು
ನಿನ್ನ ಎದೆಯ ಜೇನು ಸವಿದ ಪುಟ್ತ ದುಂಬಿ ನಾನು

ಕರುಳ ಬಳ್ಳಿಯಿಂದ ನನ್ನ
ಹಸಿವನಡಗಿಸಿದೆ ನೀನು
ಅಪ್ಪಿ ಹಿಡಿದು ತೊಳ್ಗಳಲ್ಲಿ
ಅಮ್ರುತವನುಣಿಸಿದೆ ನೀನು
ಅಮ್ಮಯೆಂದು ಕರೆದಾಕ್ಷಣ
ನನ್ನನರಸಿ ಬಂದೆ ನೀನು
ನೋವುಗೊಂಡು, ಕಣ್ಣೀರನುಂಡು
ನನ್ನ ಕಣ್ಣೊರೆಸಿದ ದೇವಿ ನೀನು


ನೀನಿತ್ತ ಉಸಿರಿನಿಂದ ಬೆಳೆದೆ
ನಾನೆಂಬ ಭಾವವನ್ನು ಬೆರೆತೆ
ಜಗದ ನಿಯಮಗಳನು ಅರಿತೆ
ನಿನ್ನ ನೆನೆದು ನೋವ ಮರೆತೆ
ನಿನ್ನ ಮೀರಿದ ದೈವವಿಲ್ಲ
ನಿನಗೆ ಮುಡಿಪು ನನ್ನ ಜೀವನವೆಲ್ಲ
ಕೈಹಿಡಿದು, ಮರ್ಗದರ್ಶಿಯಾಗಿ ನಿಲ್ಲೆ
ನೀನೆ ನನ್ನ ಬಾಳ ನೆಲೆ

ನಿನ್ನ ಗರ್ಭತೊಟ್ಟಿಲಲ್ಲಿ
ನಿಶ್ಚಿಂತನಾಗಿ ನಾನು ಬೆಳೆದೆ
ಇಹ ಕರ್ಮಭೂಮಿಯಲ್ಲಿ ದಿನವು
ಚಿಂತೆಯಿಂದ ನಾನು ಕಳೆದೆ
ಬಿಚ್ಚಿ ನಿನ್ನ ತೊಳನೊಮ್ಮೆ
ಬಾಚಿ ತಬ್ಬು ನನ್ನನೊಮ್ಮೆ
ನೋವ ಮರೆವೆ, ನಿನ್ನನರಿವೆ
ದೇವಿ ನಿನ್ನ ತೊಡೆಯನೇರುವೆ

----ರಮೇಶ ಎಸ್ ಎನ್ -----

27 comments:

Ramesha said...

friends... i got greatly inspired by viewing the pictures on Prakash sir's blog (http://ittigecement.blogspot.com/)I wanted to solute the greatest creation on earth, "Mother". Hope you will like it...

ಸಾಗರದಾಚೆಯ ಇಂಚರ said...

ರಮೇಶ್ ಸರ್
ತಾಯಿ ಎನ್ನೋ ಪದಾನೆ ಎಷ್ಟೊಂದು ಖುಷಿ ಕೊಡತ್ತೆ ಆಲ್ವಾ
ನಿಮ್ಮ ಕವನದ ತಿರುಳು ಬಹಳ ಸೊಗಸಾಗಿದೆ
ಆ ತಾಯಿಗೆ ವಂದನೆಗಳು

ಸಿಮೆಂಟು ಮರಳಿನ ಮಧ್ಯೆ said...

ರಮೇಶ್...

ತಾಯಿಹೃದಯದ ಭಾವವನ್ನು ಸುಂದರವಾಗಿ ಬಣ್ಣಿಸಿದ್ದೀರಿ...


ಚಂದದ ಕವನಕ್ಕೆ ಅಭಿನಂದನೆಗಳು...

ನನ್ನ ಬ್ಲಾಗ್ ಚಿತ್ರಗಳು ನಿಮಗೆ ಇಷ್ಟವಾಗಿದ್ದಕ್ಕೆ ಖುಷಿಯಾಗುತ್ತಿದೆ..
ಧನ್ಯವಾದಗಳು..

ನಿಮಗೆ ಇಷ್ಟವಾದ ಫೋಟೊವನ್ನು ಬಳಸಿಕೊಳ್ಳಿ ...
ನನ್ನ ಅಭ್ಯಂತರವೇನೂ ಇಲ್ಲ...

ಪ್ರಕಾಶಣ್ಣ..

ಸವಿಗನಸು said...

ರಮೇಶ್,
ಅಮ್ಮ ಅನ್ನುವ ಈ ಎರಡಕ್ಷರದಲ್ಲಿ ಎನ್ನೆಲ್ಲಾ ಇದೆ ಅಲ್ವ...
ಬಹಳ ಚೆನ್ನಾಗಿದೆ....
ಬರೀತಾ ಇರಿ...iessual

ಗೌತಮ್ ಹೆಗಡೆ said...

ammana kuritoo ene baredaroo adu aaptavaagutte...

Raghu said...

ಸುಂದರ ಕವನ..ಹೀಗೆ ಬರೆಯುತ್ತಿರಿ...
ನಿಮ್ಮವ,
ರಾಘು.

ಮನಮುಕ್ತಾ said...

ತಾಯಿಯ ಬಗ್ಗೆ ಕವನವನ್ನು ತು೦ಬಾ ಚೆನ್ನಾಗಿ ಬರೆದಿದ್ದೀರಿ.

ಗುರು-ದೆಸೆ !! said...

'Ramesha' ಅವ್ರೆ..,

ತಾಯಿನೆ ಎಲ್ಲಾ.. ಬದಲಾಗೋದಿಲ್ಲ..

ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ: http://manasinamane.blogspot.com

Anonymous said...

:-)
malathi S

shetty said...

superb Sir..

Feelings and afection towards mother ..............
always remains same..........
till the end of last breath.....

Ramesha said...

Namaste Guru... nija.. thaayi anno pada bahala khushi koduttade...dhanyavaadagalu...

Ramesha said...

Prakashanna.. nanna baraha nimage khushi kottiddare ashte saaku... nimma blog na photo balasikollona andukonde.. aadare yaako matte aa photo-galannu nodidaaga manassige besaravaytu.. inthadondu prapancha ide anta... aaddarinda balasikollalilla... nimma pratikriyege dhanyavaadagalu..

Ramesha said...

Mahesh... yerade aksharadalli idi prapanchave adagide... nimma pratikriyegaagi dhanyavaadagalu...

Ramesha said...

Goutham mattu Raaghu: nimma pratikriyege dhanyavaada... heege barta iri nanna blog ge...

Ramesha said...

Manamukta: nimagu dhanyavaadagalu...

Ramesha said...

Gurudese & Malathi: Thanks nimma anisikegalannu vyaktapadisiddakke... heege barta iri...

Ramesha said...

shetty: yes thats right... we carry this one single word that means a lot to us, throughout our life.... keep visiting my blog... thanks..

Manasaare said...

ರಮೇಶ್ ಅವರೇ ,
ಅಮ್ಮ , ತಾಯಿ , ಅವ್ವ ಅಂದ್ರೇನೆ ಏನೋ ಒಂದು ಅದ್ಭುತ್ ಅನುಭವ ಅಲ್ವಾ . ನಾವು ಎಸ್ಟೆ ದೊಡ್ಡವರಾದರು , ಸ್ವತಹ ತಾಯಂದಿರಾದರು ಸಹ ಅಮ್ಮ ಅಂದಾಕ್ಷಣ ಮತ್ತೆ ಮಕ್ಕಳಾಗಿ ಬಿಡ್ತಿವಿ .
ನಾನು ತಾಯಿ ಆದಮೇಲೆ ಅಂತಲೂ ಅಮ್ಮ ಇನ್ನು ಜಾಸ್ತಿ ಅರ್ಥವಾಗಿದ್ದರೆ . ಹೊರಗಿನ ನೋವು ಸಾಕಾಗಿ ಮತ್ತೆ ಅಮ್ಮನ ಗರ್ಭತೊಟ್ಟಿಲನಲ್ಲಿ ನಿಶ್ಚಿಂತೆಆಗಿ ಇರೋ ನಿಮ್ಮ ಭಾವನೆಗಳು ಕೆಲವೊಮ್ಮೆ ನನಗು ಅನ್ನಿಸುತ್ತವೆ . ಹಾಗೆಯೇ ಒಬ್ಬ ತಾಯಿ ಆಗಿ , ನನ್ನ ಮಗನಿಗೆ ಏನಾದ್ರು ಕೆಮ್ಮು , ಜ್ವರ ಬಂದು ಒದ್ದಡುವಾಗ್ ಅವನ ನೋವು ನೋಡಲಾಗದೆ , ಈ ಥರ infection ಆಗದ ಹಾಗೆಯೇ ಅವನ್ನ ಎತ್ತಿ ಮತ್ತೆ ನನ್ನ ಹೊಟ್ಟೆ ಒಳಗೆ safe ಆಗಿ ಇಟ್ಟಿಕೊಬೇಕು ಅನ್ನಿಸುತ್ತೆ

Manasaare

Shashi jois said...

ರಮೇಶ್ ,
ತುಂಬಾ ಚೆನ್ನಾಗಿದೆ. ನಿಮ್ಮ" ಅಮ್ಮ" ಕವನ. ಓದಿ ನನ್ನ ಅಮ್ಮನ ನೆನಪಾಯ್ತು..ಥ್ಯಾಂಕ್ಸ್."ಅಮ್ಮ" ಎನ್ನುವ ಪದಕ್ಕೆ ಅಂತಹ ಮಾಂತ್ರಿಕ ಶಕ್ತಿ ಇದೆ .ಅಮ್ಮನಿಗೆ ದೊಡ್ಡ ನಮನಗಳು .

Ramesha said...

Manasaare avare,

Nimma anisikegalannu ashtu chennagi barediruvudu ishta aytu.. Nimage nanna kavana ishta aytu annodannu keli khushi aytu.. heege barta iri :)

Ramesha said...

Shashi avare,

Modalige nimage nanna blog ge swagatha.. nimage nanna kavana oadi nimma ammana nenapaytu anta keli santosha aytu.. nimma abhimana haagu pratikriyegagi dhanyavaadagalu... heege barta iri..

ಗೌತಮ್ ಹೆಗಡೆ said...

khandita barteevi marali:)

ಚುಕ್ಕಿಚಿತ್ತಾರ said...

ಅಮ್ಮನ ಮಮತೆಗೆ ಬೆಲೆ ಕಟ್ಟಲಾದೀತೆ....
ಸು೦ದರ ಕವನ..

ತೇಜಸ್ವಿನಿ ಹೆಗಡೆ said...

ತುಂಬಾ ಸುಂದರವಾಗಿದೆ ಕವನ. ತಾಯಿಯ ಕುರಿತು ಎಷ್ಟು ಬರೆದರೂ ಅದು ಮುಗಿಯದಂಥದ್ದು ಅಲ್ಲವೇ? ಜಗದೊಳಗೆ ಇನ್ನೂ ಸಾತ್ವಿಕತೆ ಉಳಿದಿರುವುದಕ್ಕೆ ಈ ಒಂದು ಬಂಧ ಬಿಗಿಯಾಗಿರುವುದೇ ಕಾರಣ.

Ramesha said...

Chukkichittaara - nija.. Ammanige saati yaaru illa.. heege barta iri.. :)

Ramesha said...

Tejaswini - modalige nimaga nanna blog prapanchakke swagatha.. nimma maathu satya... Ammana kuritu yeshtu baredaru adu saaladu... heege barta iri... :)

ಸೀತಾರಾಮ. ಕೆ. said...

ಅಮ್ಮ ಸಾಹಿತ್ಯದ ಸ್ಫೂರ್ತಿ ಸೆಲೆ. ಎಷ್ಟೊ೦ದಿವೆ ಅದರೂ ಇನ್ನೂ ಯಾವವು ಅಮ್ಮನ ಬಗ್ಗೆ ಪೂರ್ಣ ಚಿತ್ರಣ ನೀಡಿಲ್ಲ!! ಅಮ್ಮನ ವಾತ್ಸಲ್ಯದ ಹರವು ಅ೦ತಹದು ಬತ್ತಲಾಅರದ್ದು-ಮೊಗಚಿ ಖಾಲಿ ಮಾಡಲಾಗದು. ಚೆ೦ದದ ಕವನ.