Tuesday, June 1, 2010

ನನ್ನಾk

ಬರಭೂಮಿಯಂತಿದ್ದ ಮನದಿ
ಭಾವನೆಗಳ ಪೈರು ಬೆಳೆದಂತೆ
ನಿನ್ನ ನೆನಪುಗಳು ನನಗೆ !


ದಣಿದ ಭುವಿಯ ಮೆಲೆ
ತಂಪಾಗಿಸುವ ಮಳೆಹನಿಯಂತೆ
ನಿನ್ನ ಸ್ಪರ್ಶವು ನನಗೆ !!

ಬಿಸಿಲ ತಾಪದಿ ಬೆಂದು
ಗಲ್ಲವ ಬೆವರು ಚುಂಬಿಸಲು
ಬೀಸಿದ ತಂಗಾಳಿ ನಿನ್ನುಸಿರು ನನಗೆ !

ಬೆಳದಿಂಗಳ ಚಂದ್ರಮನ
ದಟ್ಟ ಕಾರ್ಮೋಡ ಕವಿದಂತೆ
ನಿನ್ನಗಲಿಕೆಯು ನನಗೆ !!
-----ರಮೇಶ ಎಸ್ ಎನ್-------

28 comments:

ಮನದಾಳದಿಂದ............ said...

"ಬರಭೂಮಿಯಂತಿದ್ದ ಮನದಿ
ಭಾವನೆಗಳ ಪೈರು ಬೆಳೆದಂತೆ
ನಿನ್ನ ನೆನಪುಗಳು ನನಗೆ"

ಸುಂದರ ಸಾಲುಗಳು.......
ಇಷ್ಟವಾಯಿತು ಕವನ....

ಸವಿಗನಸು said...

ರಮೇಶ್,
ಸುಂದರ ಕವನ.....ಚೆನ್ನಾಗಿದೆ..
ಕೊನೆ ಸಾಲು ಸೂಪರ್..

kusu Muliyala said...

ರಮೇಶ್,
ಸುಂದರ ಕವನ
ಅಭಿನ೦ದನೆಗಳು

Karthik H.K said...

3rd stanza is just too good :)

ಸಾಗರದಾಚೆಯ ಇಂಚರ said...

Ramesh Sir

good one
tumba ista aytu

Shashi jois said...

ಸೊಗಸಾದ ಕವನ ರಮೇಶ .....

Snow White said...

bhavanegalu tumbida saalugalu tumba chennagide :)

Ramesha said...

ಪ್ರವೀಣ್ - ನಿಮ್ಮ ಅಭಿಮಾನಕ್ಕೆ ಹಾಗು ಪ್ರೊತ್ಸಾಹಕ್ಕೆ ಧನ್ಯವಾದಗಳು

Ramesha said...

ಮಹೆಶ್ - ಕೊನೆಯ ಸಾಲು ಬಹುಶಹ ಎಲ್ಲಾ ಸನ್ಗಾತಿಗಳಿಗೂ ಸಹಜ ಅನ್ನಿಸುತ್ತೆ. ನೀವೇನಂತೀರಿ?

Ramesha said...

ಕುಸು - ನಿಮ್ಮ ಹಿತನುಡಿಗಳಿಗೆ ಧನ್ಯವಾದಗಳು

Ramesha said...

ಕಾರ್ಥಿಕ್ - ಮೊದಲಿಗೆ ನಿಮಗೆ ನನ್ನ ಬ್ಲೊಗ್ ಲೋಕಕ್ಕೆ ಸ್ವಾಗತ. ನಿಮಗೆ ನನ್ನ ಕವನ ಹಿಡಿಸಿತು ಅನ್ನೋದು ಸಂತಸದ ವಿಶಯ. ದಯವಿಟ್ಟೂ ಹೀಗೆ ಬರ್ತಾ ಇರಿ.

Ramesha said...

ಗುರು - ನಿಮ್ಮ ಪ್ರೊತ್ಸಾಹ ಎಂದಿನಂತೆ ಸದಾ ಇರುತ್ತದೆ. ನಿಮಗೆ ನನ್ನ ಮನದಾಳದ ಧನ್ಯವಾದಗಳು. ಹೀಗೆ ಬರ್ತಾ ಇರಿ, ಮತ್ತೆ ಬರಿತಾ ಇರಿ.

Ramesha said...

ಶಶಿಯವರೆ - ನಿಮ್ಮ ಮೆಚ್ಚುಗೆಗೆ ಧನ್ಯವಾದಗಳು. ನಿಮ್ಮ ಹಾಗೆ ಇದು ವರೆಗು ಚುಟಕ ಬರೆಯೋಕ್ಕೆ ಆಗೆ ಇಲ್ಲ ನೊಡಿ :)

Ramesha said...

Snow White - ನಿಮ್ಮ ಪ್ರೊತ್ಸಾಹಕ್ಕೆ ಧನ್ಯವಾದಗಳು. ನಿಜ ನಾನೊಬ್ಬ ಭಾವನಾತ್ಮಕ ಜೀವಿ... ಹೀಗೆ ಬರ್ತಾ ಇರಿ..

ಸಾಗರಿ.. said...

ತಮ್ಮ ಕವನಗಳನ್ನು ನಾನು ಓದುತ್ತಲೇ ಇರುತ್ತೇನೆ, ಪ್ರತಿಕ್ರೀಯಿಸಲು ಸಾಧ್ಯವಾಗಿರಲಿಲ್ಲ. ತಮ್ಮ ಹಿಂದಿ ಕವನಗಳು ನನಗೆ ಭಾರೀ ಖುಷಿಕೊಡುತ್ತವೆ. ನನ್ನಾK ಕವನ ಕೂದ ಬಹಳ ನವಿರಾಗಿ ಬಂದಿದೆ.

ಜಲನಯನ said...
This comment has been removed by the author.
ಜಲನಯನ said...

ರಮೇಶ್, ತಡವಾಯ್ತು ಸಾರಿ...ಚಿಕ್ಕ ಮತ್ತು ಚೊಕ್ಕ ಪದಜೋಡಣೆಹೊತ್ತ ಮನದಾಳದ ಮಾತು...
ಜಿಪುಣ ನೀನು ಖರ್ಚು ಮಾಡದೇ ಎಂಥ ಮಹಲು...ಚನ್ನಾಗಿದೆ,,,ಸಾಲು
ದಣಿದ ಭುವಿಯ ಮೆಲೆ
ತಂಪಾಗಿಸುವ ಮಳೆಹನಿಯಂತೆ
ನಿನ್ನ ಸ್ಪರ್ಶವು ನನಗೆ !!

ತೇಜಸ್ವಿನಿ ಹೆಗಡೆ said...

good one. ಸುಂದರ ಕಲ್ಪನೆ.

© ಹರೀಶ್ said...

ರಮೇಶ್ ಸರ್
ನನ್ನಾk ಕವನ
ತುಂಬಾ ಚನ್ನಾಗಿದೆ.

Sushma Sindhu said...

ರಮೇಶ್ ರವರೆ,
ಚೆ೦ದದ ಸಾಲುಗಳು :)
ಇಷ್ಟವಾಯಿತು :)

Ramesha said...

ಸಾಗರಿ - ನಿಮ್ಮ ಅಭಿಪ್ರಾಯ ಹಾಗು ಅಭಿಮಾನಕ್ಕೆ ನನ್ನ ಧನ್ಯವಾದಗಳು.. ಓದುಗರಿಗೆ ಖುಶಿ ಕೊಟ್ಟರೆ ನನ್ನ ಪ್ರಯತ್ನ ಫಲಿಸಿತು ಅಂತ ಅಂದುಕೊತೀನಿ.. ನನಗೆ ಹಿಂದಿ ಭಾಶೆಯ ಮೇಲೂ ಬಹಳ ಅಭಿಮಾನ ಇದೆ..ಆದ್ದರಿಂದ ಬರೆಯುವ ಚಟ :)

ಹೀಗೆ ಬರ್ತಾ ಇರಿ ಹಾಗು ಬರಿತಾ ಇರಿ...

Ramesha said...

ಆಝಾದ್ ಭಾಯ್ - ನಿಮ್ಮ ಅಭಿಮಾನದ ಮಾತುಗಳಿಗೆ ನನ್ನ ಧನ್ಯವಾದಗಳು... ನೀವು ನನ್ನ ಬ್ಲೊಗ್ ಗೆ ಬರೋದು ತಡ ಅದ್ರೂ ಪರ್ವಾಗಿಲ್ಲ..ಬರ್ತಾ ಇರಿ...

ನಿಮ್ಮ ಅಭಿಪ್ರಾಯ ನನಗೆ ಮುಖ್ಯ...

Ramesha said...

ತೇಜಸ್ವಿನಿ - ನಿಮಗೆ ನನ್ನ ಕವನ ಹಿಡಿಸಿತು ಅನ್ನೋದು ಸಂತಸದ ವಿಶಯ.. ಹೀಗೆ ಬರ್ತಾ ಇರಿ...

Ramesha said...

ಹರೀಶ್ - ಮೊದಲಿಗೆ ನಿಮಗೆ ನನ್ನ ಬ್ಲೊಗ್ ಪ್ರಪಂಚಕ್ಕೆ ಸ್ವಾಗತ. ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು...

Ramesha said...

ಸುಶ್ಮ ಸಿಂಧು - ನಿಮಗೂ ನನ್ನ ಬ್ಲೊಗ್ ಪ್ರಪಂಚಕ್ಕೆ ಸ್ವಾಗತ.ನಿಮಗೆ ಇಷ್ಟವಾಯ್ತು ಅಂದಿದ್ದು ಇನ್ನೂ ಖುಶಿ ಕೊಟ್ಟ ವಿಚಾರ... ಹೀಗೆ ಬರ್ತಾ ಇರಿ.. ನಿಮ್ಮೆಲ್ಲರ ಪ್ರೊತ್ಸಾಹ ಅತ್ಯಗತ್ಯ...

Raghu said...

ರಮೇಶ್ ಅವರೇ,
ನೆನಪಿನ ಬಿಸಿಲಲ್ಲಿ ಬೆಂದ ನಿಮಗೆ ತಂಗಾಳಿಯ ಬೆಳಕ ನಿಮ್ಮಾಕೆ ಸಿಗಲಿ.
ಸುಂದರವಾದ ಸಾಲುಗಳು..
ನಿಮ್ಮವ,
ರಾಘು.

!! ಜ್ಞಾನಾರ್ಪಣಾಮಸ್ತು !! said...

Ramesha ,

ಸುಮಧುರ ಸಾಲುಗಳು..

ಸೀತಾರಾಮ. ಕೆ. / SITARAM.K said...

ತುಂಬಾ ಮಧುರಭಾವದ ಕವನ